ಭಾರತೀಯ ಕನ್ನಡ ಭಾಷೆಯ ರಿಯಾಲಿಟಿ ಟೆಲಿವಿಷನ್ ಗೇಮ್ ಶೋ ಬಿಗ್ ಬಾಸ್ ನ ಹತ್ತನೇ ಸೀಸನ್ 8ನೇ ಅಕ್ಟೋಬರ್ 2023 ರಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಸಂಜೆ 6ಕ್ಕೆ ಪ್ರಥಮ ಪ್ರದರ್ಶನ ಕಂಡಿತು. ಬನಿಜಯ್ ಅವರ ನಿಯಂತ್ರಣದಲ್ಲಿ ಎಂಡೆಮೋಲ್ ಶೈನ್ ಇಂಡಿಯಾ ನಿರ್ಮಿಸುತ್ತಿರುವ ಈ ರಿಯಾಲಿಟಿ ಶೋ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರದ ಜೊತೆಗೆ ಜಿಯೋಸಿನಿಮಾದಲ್ಲಿ 24/7 ಲೈವ್ ಸ್ಟ್ರೀಮ್ ನಲ್ಲಿ ಪ್ರಸಾರವಾಗಿತ್ತು. . ಈ ಸೀಸನ್ ಬಿಗ್ ಬಾಸ್‌ನ 10 ನೇ ಸೀಸನ್ ಆಗಿರುವುದರಿಂದ, ಪ್ರಥಮ ಬಾರಿಗೆ ಬಿಗ್‌ಬಾಸ್ ಕನ್ನಡ 100 ದಿನಗಳ ಹಬ್ಬ (ಊರ ಹಬ್ಬ) ಎಂಬ ಥೀಮ್ ಒಂದನ್ನು ಪರಿಚಯಿಸಿಯಿದೆ . ಹಿಂದಿನ ಒಂಭತ್ತು ಸೀಸನ್‌ನಂತೆಯೇ ಈ ಬಾರಿಯೂ ಕಿಚ್ಚ ಸುದೀಪ್ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ . == ಪ್ರಸಾರ == ಈ ರಿಯಾಲಿಟಿ ಶೋ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರದ ಜೊತೆಗೆ ಜಿಯೋಸಿನಿಮಾದಲ್ಲಿ 24/7 ಲೈವ್ ಸ್ಟ್ರೀಮ್ ನಲ್ಲಿ ಪ್ರಸಾರವಾಗಿತ್ತು. == ಟೀಸರ್ == ಟೀಸರ್ ಅನ್ನು 22 ಸೆಪ್ಟಂಬರ್ 2023ರಂದು ಪ್ರಸಾರ ಮಾಡಲಾಯಿತು == ನಿರ್ಮಾಣ == ಬನಿಜಯ್ ಅವರ ನಿಯಂತ್ರಣದಲ್ಲಿ ಎಂಡೆಮೋಲ್ ಶೈನ್ ಇಂಡಿಯಾ ನಿರ್ಮಿಸುತ್ತಿದೆ. === ಥೀಮ್ === ಬಿಗ್ ಬಾಸ್ ಕನ್ನಡದ ಹತ್ತನೇ ವಾರ್ಷಿಕೋತ್ಸವವನ್ನು ಆಚರಿಸಲು ಈ ವರ್ಷದ ಬಿಗ್ ಬಾಸ್ ಥೀಮ್ "ಹ್ಯಾಪಿ ಬಿಗ್ ಬಾಸ್" ಆಗಿದೆ. === ಸ್ಪರ್ಧಿಗಳು === ಈ ಸೀಸನ್ ರಿಯಾಲಿಟಿ ಕಾರ್ಯಕ್ರಮದ ಮೂಲ ಸ್ವರೂಪಕ್ಕೆ ಅಂಟಿಕೊಂಡಿದೆ. ಈ ಬಾರಿ ಸ್ಪರ್ಧಿಗಳಾಗಿ ಮನೆಗೆ ಪ್ರವೇಶಿಸುವ ಸೆಲೆಬ್ರಿಟಿಗಳನ್ನು ಮಾತ್ರ ಹೊಂದಿರುತ್ತದೆ. === ಸ್ವರೂಪ === ಈ ಕಾರ್ಯಕ್ರಮವು ಆಯ್ದ ಸ್ಪರ್ಧಿಗಳನ್ನು ಹೊರಗಿನ ಪ್ರಪಂಚದಿಂದ ಪ್ರತ್ಯೇಕವಾಗಿ 98 ದಿನಗಳವರೆಗೆ (ಅಥವಾ 14 ವಾರಗಳು) ಕಾರ್ಯಕ್ರಮಕ್ಕೆಂದೇ ನಿರ್ಮಿತವಾಘಿರುವ ಮನೆಯಲ್ಲಿ ವಾಸಿಸುತ್ತಾರೆ. ಹೌಸ್‌ಮೇಟ್‌ಗಳು ಬಿಗ್ ಬಾಸ್ ಎಂಬ ಸರ್ವಾಧಿಕಾರಿಯಿಂದ ನಿರ್ದೇಶಿಸಲ್ಪಡುತ್ತಾರೆ. ಪ್ರತಿ ವಾರ, ಒಬ್ಬ ಅಥವಾ ಹೆಚ್ಚಿನ ಹೌಸ್‌ಮೇಟ್‌ಗಳನ್ನು ಸಾರ್ವಜನಿಕ ಮತದಿಂದ ಹೊರಹಾಕಲಾಗುತ್ತದೆ. ಕೊನೆಯ ವಾರದಲ್ಲಿ, ಹೆಚ್ಚು ಮತಗಳನ್ನು ಪಡೆದ ಮನೆಯವರು ಆಟದಲ್ಲಿ ಗೆಲ್ಲುತ್ತಾರೆ. == ಮನೆಯವರ ಸ್ಥಿತಿ == == ಬಹುಮಾನ == ಬಿಗ್ ಬಾಸ್ ಕನ್ನಡ 10 ರ ವಿಜೇತ ಸ್ಪರ್ಧಿಗೆ 50 ಲಕ್ಷ ರೂ ದೊರಕಿದೆ. ಹಣದ ಬಹುಮಾನ ಜೊತೆಗೆ ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್, ಅಪೇಕ್ಷಿತ ಟ್ರೋಫಿ ಹಾಗೂ ಉಡುಗೊರೆಗಳನ್ನು ಸಹ ನೀಡಲಾಗಿದೆ . == ಟ್ವಿಸ್ಟ್ == === ವೀಕ್ಷಕರು ಮನೆಯ ಸ್ಪರ್ಧಿಗಳನ್ನು ಆಯ್ಕೆ ಮಾಡುತ್ತಾರೆ === ಪ್ರತಿ ಸ್ಪರ್ಧಿಗಳನ್ನು ಪ್ರೀಮಿಯರ್‌ನಲ್ಲಿ ಪರಿಚಯಿಸಿದ ನಂತರ, ವೀಕ್ಷಕರಿಗೆ ಅವರನ್ನು ಬಿಗ್‌ಬಾಸ್ ಮನೆಗೆ ಕಳುಹಿಸುವ ಬಗ್ಗೆ ಮತ ಚಲಾಯಿಸುವ ಮೂಲಕ ಅವಕಾಶ ನೀಡಲಾಗಿತ್ತು. ಕನಿಷ್ಠ 80% ಸಾರ್ವಜನಿಕ ಮತಗಳನ್ನು ಹೊಂದಿರುವ ಸ್ಪರ್ಧಿಗಳು ಅಧಿಕೃತ ಸ್ಪರ್ಧಿಗಳಾಗಿದ್ದರು, ಹಾಗೂ 40% ರಿಂದ 80% ನಡುವೆ ಮತಪಡೆದವರನ್ನು ತಡೆಹಿಡಿಯಲಾಯಿತು ಮತ್ತು ಮನೆಯೊಳಗೆ ಪ್ರವೇಶಿಸಿಲು ತಮ್ಮ ದಾರಿಯನ್ನು ಸಂಪಾದಿಸಬೇಕಾಗಿತ್ತು. ಆದರೆ 40% ಕ್ಕಿಂತ ಕಡಿಮೆ ಮತಗಳನ್ನು ಪಡೆದವರನ್ನು ಪ್ರೀಮಿಯರ್ ದಿನವೇ ಆಟದಿಂದ ಹೊರಹಾಕಲಾಯಿತು. === ಮನೆಯವರ ಸ್ಥಿತಿಯ ಮಟ್ಟ === ಮೇಲ್ವರ್ಗದವರಿಗೆ ಮನೆಯಲ್ಲಿ ವಿಶೇಷಾಧಿಕಾರಗಳಿದ್ದವು, ಆದರೆ ಕೆಳವರ್ಗದವರು ಮನೆಯ ಎಲ್ಲಾ ಕರ್ತವ್ಯಗಳನ್ನು ಮಾಡಬೇಕಾಗಿತ್ತು, ಸೌಲಭ್ಯಗಳನ್ನು ಉಪಯೋಗಿಸುವುದನ್ನು ನಿರ್ಬಂಧಿಸಿದ್ದರು ಮತ್ತು ಕಿತ್ತಳೆ ಬಣ್ಣದ ಸೂಟ್ ಧರಿಸಿದ್ದರು. == ಸ್ಪರ್ಧಿಗಳು == ಸೀಸನ್ ೧೦ರ ಬಿಗ್‌ಬಾಸ್ ಮನೆ ಪ್ರವೇಶಿಸಿದ ಕ್ರಮದಲ್ಲಿ ಸ್ಪರ್ಧಿಗಳ ಪಟ್ಟಿ ಈ ಕೆಳಗಿನಂತೆ ಇದೆ === ವೈಲ್ಡ್ ಕಾರ್ಡ್ ಪ್ರವೇಶ === ` == ಅತಿಥಿಗಳು == == ಬಾಹ್ಯಕೊಂಡಿಗಳು == ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 10 ವೀಕ್ಷಣೆಮಾಡಿ == ಫಲಿತಾಂಶ == ವಿನ್ನರ್: ಕಾರ್ತಿಕ್ ಮಹೇಶ್ ರನ್ನರ್: ಡ್ರೋನ್ ಪ್ರತಾಪ್ ಎರಡನೇ ರನ್ನರ್: ಸಂಗೀತ ಮೂರನೇ ರನ್ನರ್: ವಿನಯ್ ಗೌಡ ನಾಲ್ಕನೇ ರನ್ನರ್: ವರ್ತೂರ್ ಸಂತೋಷ್ == ಉಲ್ಲೇಖಗಳು ==